ಪನೀರ್ ಮಖನಿ (ಪನೀರ್ ಬಟರ್ ಮಸಾಲಾ ಎಂದೂ ಕರೆಯಲ್ಪಡುತ್ತದೆ) ಪನೀರ್‌ನ ಸ್ವಲ್ಪ ಸಿಹಿಯಾಗಿರುವ ಕೆನೆಭರಿತ ಖಾದ್ಯ. ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡಿತು. ಇದರ ಗ್ರೇವಿಯನ್ನು ಸಾಮಾನ್ಯವಾಗಿ ಬೆಣ್ಣೆ (ಮಕ್ಖನ್), ಟೊಮೇಟೊ, ಗೋಡಂಬಿ ಅಥವಾ ಕೆನೆಯಿಂದ ತಯಾರಿಸಲಗುತ್ತದೆ. ಈ ಗ್ರೇವಿಯನ್ನು ತಯಾರಿಸಲು ಕೆಂಪು ಖಾರದ ಪುಡಿ ಮತ್ತು ಗರಂ ಮಸಾಲಾದಂತಹ ಸಂಪಾರ ಪದಾರ್ಥಗಳನ್ನು ಕೂಡ ಬಳಸಲಾಗುತ್ತದೆ. ಪನೀರ್ ಬಟರ್ ಮಸಾಲಾ ಭಾರತದಲ್ಲಿ ಪೂರೈಸಲು ವಿನಂತಿಸಲಾದ ಅಗ್ರ ಐದು ಆಹಾರಗಳಲ್ಲಿ ಒಂದು ಎಂದು ಒಂದು ಸಮೀಕ್ಷೆಯು ಕಂಡುಕೊಂಡಿತು. ಮಖನಿ ಎಂದರೆ 'ಬೆಣ್ಣೆಯುಳ್ಳ' ಎಂದು. ಈ ಖಾದ್ಯವು ೧೯೫೦ರ ದಶಕದಲ್ಲಿ ಹುಟ್ಟಿಕೊಂಡಿತು. ಆಗ ದೆಹಲಿಯ ಮೋತಿ ಮೆಹೆಲ್ ರೆಸ್ಟೋರೆಂಟ್‍ನ ಪಂಜಾಬಿಗಳು ಸಾಸ್‍ನ್ನು ಟೊಮೇಟೊ ಆಧಾರಿತ ಮೇಲೋಗರದಲ್ಲಿ ತಾಜಾ ಬೆಣ್ಣೆಯನ್ನು ಸೇರಿಸಿ ಆವಿಷ್ಕರಿಸಿದರು. == ಉಲ್ಲೇಖಗಳು ==